Free KCET and NEET, coaching is providing by karnataka

ರಾಜ್ಯದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ KCET, NEET, & JEE ಪರೀಕ್ಷೆಗಳಿಗೆ ತರಬೇತಿ ದೊರೆಯಲಿದೆ.

ಗ್ರಾಮೀಣ ಭಾಗದ ಅದರಲ್ಲೂ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವುದು ಕಡಿಮೆ. ಹೀಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ಧರಿಸಿದೆ. ಶಿಕ್ಷಣ ಇಲಾಖೆಯ ಅದೀನದಲ್ಲಿರುವ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ಹಣವನ್ನು ತರಬೇತಿಗೆ ಬಳಸಲು ಉದ್ದೇಶಿಸಲಾಗಿದೆ.

Whatsapp Group Join
Telegram channel Join

ಪ್ರತಿವರ್ಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಈ ನಿಧಿ ಬಳಸಲಾಗುತ್ತಿತ್ತು. ಪ್ರತಿ ವರ್ಷ 7 ರಿಂದ 8 ಕೋಟಿ ರೂ. ಮಾತ್ರ ನಿಧಿ ಸಂಗ್ರಹವಾಗುತ್ತದೆ. ಈ ವರ್ಷ ತೆರಿಗೆ ಇಲಾಖೆ ಬಳಿ ಸಿಲುಕಿದ್ದ 23 ಕೋಟಿ ರೂ. ಗಳನ್ನು ಶಿಕ್ಷಣ ಇಲಾಖೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿರುವುದರಿಂದ 31 ಕೋಟಿ ರೂ. ಗಳನ್ನು 2023ರ ಆರ್ಥಿಕ ವರ್ಷ ಮುಕ್ತಾಯ ವೇಳೆಗೆ ಬಳಕೆ ಮಾಡಿಕೊಳ್ಳಬೇಕಿದೆ ಇಲ್ಲವಾದರೆ ತೆರಿಗೆಯಿಂದ ಹಿಂಪಡೆದ ಹಣ ನಷ್ಟವಾಗಲಿದೆ. ಈ ಎಲ್ಲ ಕಾರಣಗಳಿಂದಾಗಿ ಈ ಬಾರಿ ಪಿಯು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ KCET, NEET, JEE ಪರೀಕ್ಷೆಗಳಿಗೆ ತರಬೇತಿ ನೀಡಲು ತೀರ್ಮಾನಿಸಿದೆ.

ಯಾರಿಗೆ ತರಬೇತಿ?

ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ 3.76 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಇದರಲ್ಲಿ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರ ಈ ತರಬೇತಿ ಸಿಗಲಿದೆ. ರಾಜ್ಯದಲ್ಲಿರುವ 204 ಹಂತಗಳಲ್ಲಿ ಅಂದರೆ ಪ್ರತಿ ಹಂತದಲ್ಲಿ 40 ವಿದ್ಯಾರ್ಥಿಗಳಂತೆ ಅಂದಾಜು 8,160 ವಿದ್ಯಾರ್ಥಿಗಳನ್ನು ಇಲಾಖೆ ಆಯ್ಕೆಮಾಡಲಿದೆ.

ಯಾವ ರೀತಿ ತರಬೇತಿ?

ಆಯ್ಕೆಯಾಗುವ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅವರಿಗೆ ಕಾಲೇಜಿನ ಸಮೀಪದಲ್ಲಿರುವ ಕಟ್ಟಡಗಳಲ್ಲಿ ತರಬೇತಿ ನೀಡಲಾಗುತ್ತದೆ. ಬೋಧಿಸಲು ಕೆಲವು ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿರುವ ಅಥವಾ ತರಬೇತಿ ನೀಡಲು ಆಸಕ್ತಿ ಇರುವವರನ್ನು ಇಲಾಖೆ ಆಯ್ಕೆ ಮಾಡಿಕೊಳ್ಳಲಿದೆ. ಪ್ರತಿ ತರಬೇತಿಗೆ ಇಂತಿಷ್ಟು ಎಂದು ಬೋಧನಾ ವೆಚ್ಚವನ್ನು ನೀಡಲಿದೆ ಬೋಧನಾ ಅವಧಿ, ಗೌರವಧನ ಸದ್ಯಕ್ಕೆ ಇನ್ನೂ ನಿಗದಿಯಾಗಿಲ್ಲ.

ಯಾವಾಗಿನಿಂದ ತರಬೇತಿ?

ಸಾಮಾನ್ಯವಾಗಿ ಏಪ್ರಿಲ್ ನಿಂದ ಮೇ ಅವಧಿಯಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಮಾರ್ಚ್ ಅವಧಿಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ಎಲ್ಲಾ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲಿ ವೇಳಾಪಟ್ಟಿ ರೂಪಿಸಿ ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆ ಕ್ರಿಯಾಯೋಜನೆ ಸಿದ್ಧಪಡಿಸುತ್ತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲನೇವಾರದಲ್ಲಿ ತರಬೇತಿ ಆರಂಭವಾಗುವ ನಿರೀಕ್ಷೆ ಇದೆ.

ಕಲ್ಯಾಣ ನಿಧಿಯಲ್ಲಿ ಈ ಬಾರಿ ಹೆಚ್ಚಿನ ಅನುದಾನ ಸಂಗ್ರಹವಾಗಿರುವುದರಿಂದ ವಿವಿಧ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವುದಕ್ಕೆ ಯೋಜನೆ ರೂಪಿಸುತ್ತಿದ್ದೇವೆ ಸದ್ಯದಲ್ಲೇ ತರಬೇತಿ ಆರಂಭವಾಗಲಿದೆ.

ಬಿ ಸಿ ನಾಗೇಶ್ ( ಸಚಿವರು.ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ )

ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ಸೈಟ್ ಗೆ ಬೆಟ್ಟಿ ನೀಡಿ ಇಲಾಖೆ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ

https://www.schooleducation.kar.nic.in/index.html

KCET NEET ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಕೆಳಗೆ ನೀಡಿರುವ ಆರ್ಟಿಕಲ್ ಓದಿ link ಕೆಳಗೆ ನೀಡಲಾಗಿದೆ 👇

https://goalboardacademy.com/?p=833

Share and support

Leave a Comment

Your email address will not be published. Required fields are marked *

Whatsapp Group Join
Telegram channel Join